‘ಮಾಲ್’ ಮಾಲು ಮಾಲೂ- ಸಂಪೂರ್ಣ!
(ಮೊನ್ನೆ ಕುಟುಂಬದ ಕೆಲಸದ ಮೇಲೆ ಚೆನ್ನೈ ನಿಂದ ಬೆಂಗಳೂರಿಗೆ ಹೋಗಿದ್ದೆ..ಬಹಳ ಬದಲಾಗಿದೆ ನಮ್ಮ ಊರು… ಅಲ್ಲೊಂದು ಹೊಸ ಮಾಲ್ ಆಗಿದೆ, ಮಂತ್ರಿ ಸ್ಕ್ವೇರ್ ಮಾಲ್ ಅಂತಾ, ನಮ್ಮ ಮಲ್ಲೇಶ್ವರಂ ಕೊನೆಯಲ್ಲಿ ಎಂದು ಒಬ್ಬರು ಹೇಳಿದ್ದರಿಂದ ನೋಡುವಾ ಎಂದು ಅಲ್ಲಿಗೆ ಹೋಗಿದ್ದೆ..ಸಂಪಿಗೆ ಚಿತ್ರಮಂದಿರದ ಹತ್ತಿರ ಇರುವ ಈ ವೈಭವೋಪೇತ ಹೊಸ ಮಾಲ್ ನವ ಯುವಜೋಡಿಗಳ ಮಿಲನ ಸ್ಥಳ ಎಂದು ಮೊದಲ ನೋಟಕ್ಕೇ ಅರಿವಾಯಿತು…ನಾಲ್ಕನೆ ಮಹಡಿಯ ಫುಡ್ ಕೋರ್ಟಿನಲ್ಲಿ ಕುಳಿತೆ, ಅಲ್ಲಿನ ಶೃಂಗಾರ ಪ್ರಿಯ ಜೋಡಿಗಳ ಮುಕ್ತ ಕೈಚಳಕ ನೋಡುತ್ತಾ …ಅದೇನು, ಹುಡುಗರು ಗರ್ಲ್ ಫ್ರೆನ್ಡ್ ಗಳಿಗೆ ಕೆನ್ನೆ ಮುದ್ದಿಸುವುದು, ಹೈ-ಫೈ ಮಾಡುವುದು…ಕೈ ಬಿಡುವುದು, ಕಿಲಕಿಲ ನಗುವುದು, ಕಾಲು ಕಾಲು ತಾಗಿಸುವುದು..!!..ಕೆಲವರು ಕೈ ಕೈಹಿಡಿದು ಕತ್ತಲು ಕತ್ತಲಾದ ಆ ಐನಾಕ್ಸ್ ಚಿತ್ರಮಂದಿರದ ಒಳಗೆಯೂ ಪ್ರವೇಶಿಸುತ್ತಿದ್ದಾರೆ…ಸರಿ, ಅಲ್ಲಿ ಹುಡುಗಿಯರ ಅಂತರಂಗವೆಲ್ಲಾ ಕತ್ತಲಲ್ಲಿ ಬಹಿರಂಗ ಮಾಡುತ್ತಾರೆ ಇನ್ನು! ಒಬ್ಬನೇ ಮಿಲ್ಕ್ ಶೇಕ್ …